ವಂ|ಮಹೇಶ್ ಡಿಸೋಜಾ ನಿಧನಕ್ಕೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಸಂತಾಪ
ವಂ|ಮಹೇಶ್ ಡಿಸೋಜಾ ನಿಧನಕ್ಕೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಸಂತಾಪ
ಉಡುಪಿ: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಮತ್ತು ಡೋನ್ ಬೊಸ್ಕೊ ಶಾಲೆಯ ಪ್ರಾಂಶುಪಾಲ ಯುವ ಧರ್ಮಗುರು ವಂ. ಮಹೇಶ್ ಡಿಸೋಜಾರವರ ಅಕಾಲಿಕ ನಿಧನಕ್ಕೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಉಡುಪಿ ಧರ್ಮಪ್ರಾಂತ್ಯ ಘೋಷಣೆಯಾದ ಬಳಿಕ ಪ್ರಥಮ ಧರ್ಮಗುರುಗಳಾಗಿ ಗುರು ದೀಕ್ಷೆಯನ್ನು ಪಡೆದು ತಾನು ಬೆಳೆಯುವುದರೊಂದಿಗೆ ಹಲವರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಿದ ಹಿರಿಮೆ ಅವರದ್ದಾಗಿತ್ತು. ಡೋನ್ ಬೋಸ್ಕೊ ಸಿಬಿಎಸ್ಇ ಶಾಲೆಯ ಮಾನ್ಯತೆ ಪಡೆಯುವಲ್ಲಿ ಮತ್ತು ಸಂಸ್ಥೆಯ ಉನ್ನತೀಕರಣ ಕೆಲಸದಲ್ಲಿ ತಮ್ಮನ್ನೆ ತೊಡಗಿಸಿ, ಶಾಲಾ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿದ ಅವರ ನಿಸ್ವಾರ್ಥ ಸೇವಾ ಮನೋಭಾವಾದಿಂದ ಸೇವೆ ಮಾಡಿದ ಅವರು ಕೆಥೊಲಿಕ್ ಸಭಾ ಸಂಘಟನೆಗೂ ಕೂಡ ಸದಾ ಪ್ರೋತ್ಸಾಹ ನೀಡುತ್ತಿದ್ದರು.
ಭಗವಂತನು ವಂ. ಮಹೇಶ್ ಡಿಸೋಜಾರವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಮತ್ತು ಅವರ ಅಕಾಲಿಕ ನಿಧನದಿಂದ ಶೋಕತಪ್ತರಾದ ಅವರ ಕುಟುಂಬವರ್ಗಕ್ಕೆ, ಡೋನ್ ಬೋಸ್ಕೊ ಕುಟುಂಬಕ್ಕೆ ಹಾಗೂ ಎಲ್ಲಾ ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
